Petition to Sushma Swaraj

The Petition will help them come back home safely and also bring to light the real face of agencies those fraud people skim money offering better jobs and future in saudi arabia.

No Title

Dear Sushma Ji,

Let us help damodar shettigar and puneet jayraj and bring them back to India safe, the men only wanted work, the agency cheated them.

they are in a bad condition and need of help.

======
ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವರು ಭಾರತ ಸರ್ಕಾರ
ಇವರಿಗೆ…..
ಕರ್ನಾಟಕ ರಾಜ್ಯದ ಮಂಗಳೂರು ಸಮೀಪದ ಗಂಜಿಗಟ್ಟಿ ಹಾಗೂ ಮುಲ್ಕಿಯ ದಾಮೋದರ್ ಶೆಟ್ಟಿಗಾರ್ (31) ಹಾಗೂ ಪುನೀತ್ ಜಯರಾಜ್ ರಾದ ನಾವು ಕಳೆದ ಡಿಸೆಂಬರ್ನಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದೆವು. ತಲಾ 78 ಸಾವಿರ ರೂ. ನೀಡಿ ಏಜೆಂಟ್ ಮೂಲಕ ಕೆಲಸಕ್ಕೆಂದು ಸೌದಿಗೆ ಬಂದಿದ್ದೇವು. ಇಲ್ಲಿಗೆ ಬಂದ ಬಳಿಕ ನಾವು ಮೋಸ ಹೋಗಿದ್ದೇವೆ ಎಂಬುದು ಗೊತ್ತಾಯಿತು. ಪುನೀತ್ ಜಯರಾಜ್ ನಾದ ನಾನು ಕಳೆದ ಡಿಸೆಂಬರ್ನಿಂದ ಕಾರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದು, ನಾಲ್ಕು ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಇದೀಗ ಸೌದಿ ಅರೇಬಿಯಾದ ನಾಗರಿಕ ವೀಸಾವನ್ನು ಸೀಸ್ ಮಾಡಲಾಗಿದೆ. ಇದರಿಂದ ನಾವು ನೋವು ಅನುಭವಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಸಹಾಯ ಮಾಡುವಂತೆ ಭಾರತೀಯ ವಿದೇಶಾಂಗ ಇಲಾಖೆಗೆ ಏಪ್ರಿಲ್ 4 ರಂದು ಮಾಹಿತಿ ನೀಡಿದ್ದೇವೆ. ವಿದೇಶದಲ್ಲಿ ಸಮಸ್ಯೆಗೆ ಸಿಲುಕಿದವರ ನೆರವಿಗೆ ಧಾವಿಸುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತೀವ್ರ ಆತಂಕದಲ್ಲಿರುವ ನಮ್ಮ ನೆರವಿಗೆ ಧಾವಿಸಬೇಕು. ಸೌದಿ ದೂತಾವಾಸಕ್ಕೆ ಮನವಿ ಮಾಡಿ ಈ ನರಕದಿಂದ ಬಿಡಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡುತ್ತಿದ್ದೇವೆ ಎಂಬುದು ಈ ಯುವಕರ ಅಳಲಾಗಿದೆ.
ದಯವಿಟ್ಟು ವಿದೇಶಾಂಗ ಸಚಿವರು ಈ ನತದೃಷ್ಟ ಯುವಕರ ನೆರವಿಗೆ ಧಾವಿಸಬೇಕಿದೆ. ಇದು ಕರ್ನಾಟಕ ರಾಜ್ಯದ ಜನರ ಮನವಿಯಾಗಿದ್ದು, ವಿದೇಶಾಂಗ ಸಚಿವಾಲಯ ತಕ್ಷಣ ನೆರವಿಗೆ ಧಾವಿಸಲಿದೆ ಎಂಬ ವಿಶ್ವಾಸವಿದೆ.

Signed,

[signature]

Spread the word || ಸಾಮಾಜಿಕ ನೆಟ್ವರ್ಕ್ಗಳಲ್ಲಿ ಇದನ್ನು SHARE ಮಾಡಿ